ಇವರ ಪೂರ್ವ ನಾಮ ನವರತ್ನ ಶ್ರೀನಿವಾಸಾಚಾರ್ಯರು.
ಪೂರ್ವಾಶ್ರಮದ ಹಿರಿಯ ಸಹೋದರರಾದ ನವರತ್ನ ಪುರುಷೋತ್ತಮಾ-ಚಾರ್ಯರಲ್ಲಿಯೇ ಪ್ರಾಥಮಿಕ ಶಾಸ್ತ್ರಾಧ್ಯಯನ ಮಾಡಿದ್ದಾರೆ. ನಂತರ ಶ್ರೀ ಸತ್ಯಬೋಧತೀರ್ಥರಲ್ಲಿ ಅಧ್ಯಯನವಾಗಿದೆ. ಪ್ರಚಂಡ ಪಂಡಿತರೆಂದು ವಿದ್ವತ್ ಸಭೆಗಳಲ್ಲಿ ಇತರ ವಿದ್ವಾಂಸರು ಇವರನ್ನು ಗುರುತಿಸಿದ್ದಾರೆ. ಪೂರ್ವಾಶ್ರಮದ ಅಣ್ಣಂದಿರಿಂದಲೇ ಆಶ್ರಮ ಪಡೆದು, ಸಂಸ್ಥಾನಾಧಿಪತಿಗಳಾಗಿ ಮಧ್ವಮತ ಪ್ರಚಾರಗೈದಿರುವರು. ಉತ್ತರ ಕರ್ನಾಟಕದಲ್ಲಿ ಕ್ಷಾಮ ಉಂಟಾಗಿದ್ದಾಗ, ಶ್ರೀಮಠದ ಹಲವು ಸ್ವರ್ಣವಸ್ತುಗಳನ್ನು ಒತ್ತೆ ಇಟ್ಟು, ಆ ಹಣದಿಂದ ಜನರಿಗೆ ಅನ್ನೋದಕ ನೀಡಿರುವರು. ವಿಶೇಷ ವಿರಕ್ತರಾಗಿ, ಮಹಾತಪಸ್ವಿಗಳೆಂದೆನಿಸಿ ಧರ್ಮಪ್ರಚಾರ ಕಾರ್ಯವನ್ನೇ ಪ್ರಮುಖಾಂಶವೆಂದು ಗಣನೆ ಮಾಡಿ, ಕರ್ನಾಟಕದ ಅನೇಕ ಭಾಗಗಳಲ್ಲಿ ಮೊಕ್ಕಾಂ ಮಾಡಿ ಶಿಷ್ಯ ಸಮೂಹಕ್ಕೆ ಉಪದೇಶ ನೀಡಿದ್ದಾರೆ. ಕರ್ಜಗಿ (ಹಾವೇರಿ ಡಿ।।) ಯಲ್ಲಿ ಒಂದು ವರ್ಷವಿದ್ದು ಪಾಠ-ಪ್ರವಚನ ನಡೆಸಿದ್ದಾರೆ ನಂತರ ಮೈಸೂರಿಗೆ ದಿಗ್ವಿಜಯ ಮಾಡಿದ್ದಾರೆ.
ಮಹಾರಾಜರು ಇವರನ್ನು ಬಹಳ ವೈಭವದಿಂದ ಅನೇಕ ದಿನಗಳವರೆವಿಗೆ ಸತ್ಕರಿಸಿದ್ದಾರೆ. ನವರತ್ನಗಳಿಂದ ಅಭಿಷೇಕವನ್ನು ಏರ್ಪಡಿಸಿದ್ದರು. ಅರಮನೆಯ ಸನೀಹದಲ್ಲಿಯೇ ರಾಜರ ಕೋರಿಕೆಯಂತೆ ಒಂದು ನಿವೇಶನದಲ್ಲಿ ಶ್ರೀಮಠವನ್ನು ಕಟ್ಟಿಸಿದ್ದರು. ರಾಜರ ಆಸ್ಥಾನದ ಕಾರ್ಯಗಳಿಗೆ ಶ್ರೀಗಳವರು ಆಗಾಗ್ಗೆ ಹಿತವಚನ ರೂಪವಾದ ಸಲಹೆ ನೀಡುತ್ತಿದ್ದರು. ಮೇಲಾಗಿ ಅರಮನೆಯ ಸರಹದ್ದಿನಲ್ಲಿಯೇ ಶ್ರೀ ಶ್ವೇತವರಾಹ ಮೂರ್ತಿಯ ಪ್ರತಿಷ್ಠಾಪನೆಯನ್ನು ಶ್ರೀಗಳವರಿಂದ ರಾಜರು ಏರ್ಪಾಡು ಮಾಡಿದ್ದರು. ಹೀಗೆ ರಾಜರಿಗೆ ಶ್ರೀ ಶ್ರೀಗಳವರಲ್ಲಿ ಅಪಾರ ಗೌರವವಿತ್ತು.
ಶ್ರೀಗಳವರು ತಮ್ಮ ಶಿಷ್ಯ ಸಮೂಹಕ್ಕೆ ನಿತ್ಯದಲ್ಲಿ ಪಾಠ-ಉಪದೇಶಗಳನ್ನು ತಪ್ಪದೇ ಮಾಡುತ್ತಿದ್ದರು. ವಿದ್ವಾಂಸರಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಅವರ ಕಾಲದಲ್ಲಿ ಅಂದು ಪ್ರಸಿದ್ದರಾಗಿದ್ದ ಹುಲಗೀ ಶ್ರೀಪತ್ಯಾಚಾರ್ಯರು, ಬ್ರಹ್ಮಾಂಡ ವಿಷ್ಣು ಪಾದಾಚಾರ್ಯರು ಮುಂತಾದ ಅನೇಕ ಪಂಡಿತರು ಆಸ್ಥಾನ ಪಂಡಿತರೆಂದು ಗೌರವಿಸಲ್ಪಡುತ್ತಿದ್ದರು.
ಶ್ರೀಮದಾಚಾರ್ಯರಿಂದ ರಚಿತ 'ತತ್ತೋದ್ಯೋತ' ಗ್ರಂಥಕ್ಕೆ ವಿಸ್ತಾರವಾದ ವ್ಯಾಖ್ಯಾನವನ್ನು ಗುರುಗಳ ಅನುಮತಿ ಪಡೆದು, 'ತದ್ಯುಮಣಿ' ಎಂಬ ಶೀರ್ಷಿಕೆಯೊಂದಿಗೆ ಹುಲಗಿ ಆಚಾರ್ಯರು ರಚಿಸಿ - ಶ್ರೀಪಾದಂಗಳವರ ಸಮ್ಮುಖದಲ್ಲಿಟ್ಟು ಅವರಿಂದ ಆಶೀರ್ವಾದವನ್ನು ಕೋರಿ, ಗುರುಗಳಿಂದ ಮಂತ್ರಾಕ್ಷತೆ ಪಡೆದು, ನಂತರ ಲೋಕಾರ್ಪಣೆ ಮಾಡಿದರು. ಮಾಧ್ವವಾಹ್ಮಯದ ವೇದಾಂತ ವರ್ಗದಲ್ಲಿ - 'ದೈತದ್ಯುಮಣಿ' ಗ್ರಂಥವನ್ನು ಉನ್ನತ ವರ್ಗದಲ್ಲಿರಿಸಿ ವಿದ್ವಾಂಸರು ಉದ್ಧಂಥವೆಂದು ಪರಿಗಣಿಸಿರುವರು. ಶಾಸ್ತ್ರಗ್ರಂಥಗಳಲ್ಲಿ ಆಳವಾದ ದೃಷ್ಟಿಕೋಣದಿಂದ ಕೂಡಿರುವ ವಿದ್ವಾಂಸರು ಮಾತ್ರವೇ ಈ ಗ್ರಂಥದ ಅಧ್ಯಯನಕ್ಕೆ ಅರ್ಹತೆ ಉಳ್ಳವರಾಗಿರುತ್ತಾರೆ ಎಂದು ಪ್ರತೀತಿ ಇದೆ. ಪಂಡಿತೋತ್ತಮ ಹುಲಗೀ ಆಚಾರ್ಯರು ಆ ಗ್ರಂಥದ ಅಂತ್ಯ ಶ್ಲೋಕದಲ್ಲಿ ಗುರುಗಳ ಮಂತ್ರಾಕ್ಷತೆ ಬಲದಿಂದ ಈ ಗ್ರಂಥ ರಚನೆಯಾಗಿದೆ - ಎಂದಿದ್ದಾರೆ. ಶಿಷ್ಯರು ತಮ್ಮ ಗುರುಗಳ ಬಗೆಗೆ ಮಹತ್ವ ವಿಷಯ ತಿಳಿಸಿ ಗುರುಗಳ ಜ್ಞಾನಾಕಾರ ಮಟ್ಟವನ್ನು ನಿರೂಪಿಸಿದ್ದಾರೆ. -
'ದೈತ ದ್ಯುಮಣಿ' ಗ್ರಂಥೋಕ್ತ ಆದಿ-ಅಂತ್ಯ ಶ್ಲೋಕಗಳು
ಆದಿ:
ರಘುಪತಿಪದಪಾಥೋಜಾತಗಂಧಾಭಿನಂದೀ ನಿಖಿಲನಿಗಮಚರ್ಚಾಸದ್ವಿಲಾಸೈಕಶೌಂಡಃ |
ಜಯತಿ ಯಮಿಕುಲೇಶಃ ಸತ್ಯಸಂಕಲ್ಪನಾಮಾ ಗುರುರಖಿಲಬುಧಾನಾಂ ಭಕ್ತಿ ವೈರಾಗ್ಯರಾಗಃ ||
ಅಂತ್ಯ :
ಯನ್ಮಂತ್ರಾಕ್ಷತಮಾಹಾತ್ಮಾತ್ ಗ್ರಂಥೋsಯಂ ಪೂರ್ಣತಾಂ ಗತಃ |
ತಾನ್ ವಂದೇ ಸತ್ಯಸಂಕಲ್ಪಾನ್ ಅನ್ವರ್ಥಾಭಿಧಯಾ ಯುತಾನ್ ||
ಈ ಎರಡು ಶ್ಲೋಕಗಳು ಗುರುಗಳಲ್ಲಿಟ್ಟಿದ್ದ ಭಕ್ತಿ-ಗೌರವಾದಿ ಗುಣಗಳ ಬಗೆಗೆ ಸ್ಪಷ್ಟ ಬೆಳಕು ಚೆಲ್ಲುತ್ತದೆ. ಗುರುಗಳು ಸಿದ್ದಪುರುಷರಾಗಿದ್ದರು. ಇವರಿಗೆ ಗಂಗಾ ಪ್ರತ್ಯಕ್ಷವಾಗಿದೆ.
ಶ್ರೀ ಶ್ರೀಪಾದಂಗಳವರು ಸ್ವಹಸ್ತದಲ್ಲಿ (ಬರೆದಿರುವ ತತ್ವಪ್ರಕಾಶಿಕಾಗ್ರಂಥ ಮತ್ತು ಶ್ರೀಮನ್ಯಾಯಸುಧಾ ಯಾದುಪತ್ಯ ಟಿಪ್ಪಣಿಗಳೂ ಇಂದಿಗೂ ಲಭ್ಯವಿದೆ. (ಒಟ್ಟು ೮೪೯ ಪತ್ರಗಳಿವೆ. ತಮ್ಮ ಗುರುಗಳು ರಚಿಸಿರುವ ಹಲವು ಗ್ರಂಥಗಳನ್ನೂ ಪ್ರತಿ ಮಾಡಿದ್ದಾರೆ.
ಶ್ರೀಗಳವರು ಸುಮಾರು ಹತ್ತುವರ್ಷಗಳ ಅವಧಿಯಲ್ಲಿ ಶ್ರೀ ಮೂಲರಾಮ-ದೇವರನ್ನು ಅರ್ಚಿಸುತ್ತಾ ತತ್ವಪ್ರಚಾರಗೈಯುತ್ತಾ ಕ್ರಿ.ಶ. ೧೮೪೦ ರಲ್ಲಿ ನಾರಾಯಣಪರರಾದರು. ಮೈಸೂರಿನಲ್ಲಿರುವ ಇವರ ಮೂಲ ವೃಂದಾವನದ ಕೆಳಗಿನ ಭಾಗದಲ್ಲಿ (ಕೂರ್ಮಸನದ ಬಳಿ) ಒಸರುವ ಗಂಗಾಜಲ ಇಂದಿಗೂ ಗೋಚರವಾಗುತ್ತದೆ. ಇವರ ತಪಃಸಿದ್ದಿ, ನಿರ್ಮಲ ಚರಿತ್ರೆಗೆ ಈ ಮಹಿಮೆಯು ಸಾಕ್ಷಿಯಾಗಿದೆ.
|| ಶ್ರೀ ಸತ್ಯಾತ್ಮತೀರ್ಥ ವಿರಚಿತಂ ಶ್ರೀ ಸತ್ಯಸಂಕಲ್ಪತೀರ್ಥ ಸ್ತೋತ್ರಮ್ ||
ಮಂತ್ರಾಕ್ಷತಾಪ್ರದಾನೇನ ಶ್ರಿಯಃಪತ್ಯಾಭಿಧೈರ್ಬುಧೈಃ |
ದ್ಯುಮಣಿಂ ಕಾರಯಾಮಾಸ ಸತ್ಸಂಕಲ್ಲೋ ಭವೇನ್ಮುದೇ ||1||
ಕ್ಷಾಮಕಾಲೇ ಕರಜಿಗ್ಯಾಂ ದ್ವಾದಶಾಬ್ದಂ ತಪಶ್ಚರನ್ |
ಅನ್ನದಾನಂ ಚ ಯಶ್ಚಕ್ರೇ ಸತ್ಸಂಕಲ್ಲೋ ಭವೇನ್ಮುದೇ || 2 ||
ಮಹಿಶೂರಮಹಾರಾಜಪ್ರಾರ್ಥನಾನುಗುಣಂ ಚ ಯಃ |
ಮಹಿಶೂರಪುರಾವಾಸಃ ಸತ್ಸಂಕಲ್ಲೋ ಭವೇನುದೇ || 3||
ಸತ್ಯಸಂತುಷ್ಟತೀರ್ಥಭೋ ದದೌ ತುರ್ಯಾಶ್ರಮಂ ಚ ಯಃ |
ತತ್ಸಂಸೇವಿತಪಾದಾಬ್ದಃ ಸತ್ಸಂಕಲ್ಲೋ ಭವೇನ್ಮುದೇ ॥ 4 ॥
ಹರಿಪಾದೋದ್ಭವಾ ಗಂಗಾ ಪಾವನೀ ಯಸ್ಯ ಸನ್ನಿಧೇ ।
ದೃಶ್ಯತೇSದ್ಯಾಪಿ ತದ್ಭಕೈಃ ಸತ್ಸಂಕಲ್ಲೋ ಭವೇನ್ಮುದೇ || 5||
ಗುರುರಾಜಾಭಿದೋ ವಿಪ್ರೋ ಗುತ್ತಲಾನ್ವಯಜಃ ಸುಧೀಃ |
ಯತ್ತೇವಯಾ ಯತಿರಭೂತ್ ಸತ್ಸಂಕಲೋ ಭವೇನ್ಮುದೇ || 6||
ಯೋ ಭಕ್ತಾ ಭಜತೇ ನಿತ್ಯಂ ಸತ್ಯಸಂಕಲ್ಪಸದ್ಗುರೂನ್ |
ಶ್ಲೋಕಷಟ್ಕಂ ಪಠನ್ ತಸ್ಯ ಶತ್ರುಷಟ್ಕಜಯೋ ಭವೇತ್ || 7 ||
|| ಇತಿ ಶ್ರೀ ಸತ್ಯಾತ್ಮತೀರ್ಥ ವಿರಚಿತಂ ಶ್ರೀ ಸತ್ಯಸಂಕಲ್ಪತೀರ್ಥ ಸ್ತೋತ್ರಮ್ ||
ಉಮರ್ಜಿ ದಾಮೋದರಾಚಾರ್ಯರಿಂದ ರಚಿತ ನವಪದ್ಯ ಸುರತ್ನಮಾಲಾ
|| ಶ್ರೀ ಗೋವಿಂದರಾಜೋ ವಿಜಯತೆ ||
ಗಂಗಾ ಲೋಕಾಂಗಸಂಗಾಗತಶಮಲಮಲಂ ಮಾಷ್ಟ್ರ್ರುಕಾಮಾ ಯಥಾ ವೈ |
ಪೂರ್ವೇಷಾಂ ಸಾ ತ್ವಿದಾನೀಮಪಿ ಜನಪರಿದೃಶ್ಯಾಥ ಪಶ್ಚಾ ಪುರಶ್ಚ ॥
ತಂ ವಂದೇ ವಂದ್ಯರಾಮಾಯುತಹರಿಚರಣಾಂಭೋಜರೋಲಂಬಲೀಲಂ
ಶಿಷ್ಯಃ ಸೈವ್ಯಾಂಘ್ರಪದ್ಮಂ ಗುರುಗುಣಮಹಿತಂ ಸತ್ಯಸಂಕಲ್ಪಭೂಪಮ್ || 1 ||
ಕೃಷ್ಣಾಖ್ಯೋ ರಾಜವರ್ಯೋ ಹ್ಯನುದಿನಮಿಹ ಯದ್ದಿವ್ಯಮಾಹಾತ್ಮದರ್ಶಿ
ನೂನಂ ಯದ್ವಿಪ್ರಯೋಗಂ ಕ್ಷಣಮಪಿ ನ ಸಹನ್ ಸ್ವೀಯರಾಜ್ಯ ನಿತಾಂತಃ |
ವಾಸಂ ಪೂರ್ಣಾದಿವಂದ್ಯೋ ನತ್ತಿನುತಿಸಹಿತಃ ಕಾರಯಾಮಾಸ ಭೂಯೋ
ತಂ ವಂದೇ ಸತ್ಯಧರ್ಮಾಷ್ಟಯಗುರುಕರಜಂ ಸತ್ಯಸಂಕಲ್ಪ ಭೂಪಮ್ || 2 ||
ಯತೇವಾಸುಪ್ರಸನ್ನೋ ರಘುಪತಿರನಿಶಂ ಮೂಲರಾಮಾರ್ಚನಾರ್ಥಂ |
ನೂನಂ ಸ್ಪರ್ಧಾಯುತೇಷು ಹೃಹಮಹಮಿಕಯಾ ಪೂರ್ವಸತ್ಪಂಡಿತೇಷು ||
ವಿದ್ಯಾವೈರಾಗ್ಯಭಾಗ್ಯಂ ಗುರುಗುಣಮಹಿತಂ ರಾಜಮಾನಂ ಗುರುಂ ವೈ |
ಸದ್ಯೋ ವಜ್ರ ಹಿ ಪೀಠ ಯದುರುವಚನತೋ ನೌಮಿ ಸಂಕಲ್ಪ ಭೂಪಮ್ || 3 ||
ಧೂಳೀ ಬಾಳಾರ್ಯನಾಮಾ ಯದಮಲಕರುಣಾಪಾತ್ರ ಭೂತೋಯಥಾ ವೈ
ಪೂರ್ವಂ ರಾಮಾರ್ಚನಾರ್ಥ೦ ಬಹುಜನವಿಬುಧೇಷ್ಯಗ್ರಗಣ್ಯ ಬಭೂವ |
ಏವಂ ಸತ್ಯಪ್ರಮೋದಾಭಿಧವರಗುರುರಪ್ಯಾಶ್ರಿತೋ ದಿವ್ಯಪೀಠಂ
ಯತ್ತೇವಾಸಾಧನೇನ ಪ್ರಣಮತ ಸತತಂ ಸತ್ಯಸಂಕಲ್ಪರಾಜಮ್ || 4 ||
ಅತ್ರತ್ಯಾಸ್ಸರ್ವಲೋಕಾ ಗುರುವರಕರುಣಾಪಾತ್ರಭೂತಾ ನಿತಾಂತಂ
ದ್ರವ್ಯಜ್ಞಾನಾದಿಯುಕ್ತಾಃ ಪ್ರತಿದಿನಮಪಿ ಯತೇವನೋತ್ಸಾಹಯುಕ್ತಾಃ
ತಂ ವಂದೇ ಸತ್ಯಧರ್ಮಾಭಿಧಗುರುಕರುಣಾಪಾತ್ರಭೂತಂ ಪವಿತ್ರಂ
ಭೂಮಿಸ್ಥಂ ಭೂರಿಭಾಗ್ಯಂ ಹರಿಚರಣಗತಂ ಸತ್ಯಸಂಕಲ್ಪಕಲ್ಪಮ್ | 5 ||
ಮಾಧ್ವ ಗ್ರಂಥಾನನೇಕಾನಪಿ ಕಿಲ ನ ಪಠನ್ ಯತೃಪಾಲೇಶಲೇಶಾತ್
ವಿದ್ವಾನ್ ವಿದ್ವತ್ಸಭಾಯಾಂ ಅನಿತರಸುಲಭಾಂ ಚಂದ್ರಿಕಾಂ ವ್ಯಾಜಹಾರ |
ಪಶ್ಚಾದ್ಯತ್ಪಾದಪಂಕೇರುಹಮುಪಗತವಾನ್ ಮೋದಪೂರ್ಣಾಶ್ರುಯುಕ್ತಃ
ತಂ ವಂದೇ ಸತ್ಯಧರ್ಮಾಷ್ಟಯಗುರುಕರಜಂ ಸತ್ಯಸಂಕಲ್ಪಭೂಪಮ್ || 6 ||
ಯೋ ಯೋಗೀ ಯೋಗತೋsಗಾತ್ ಹರಿಸದನಮಹೋ ದ್ಯೋತನಾಯ್ಕೆವ ತಸ್ಯ
ಕಾಯೋ ನಾಮಾಂಕಿತೋsಭೂದಪಿ ಬಹುದಿವಸಾನಂತರಂ ಭೂಸ್ಥಿತೋSಪಿ |
ಯೋಗೇಶೈ: ಸೇವ್ಯಪಾದಂ ಗುರುವರಕರುಣಾಪಾತ್ರಭೂತಂ ವಿಚಿತ್ರಾ-
ನೇಕ ವ್ಯಾಖ್ಯಾನಲೋಲಂ ಪ್ರಣಮ ಗುರುವರಂ ಸತ್ಯಸಂಕಲ್ಪಭೂಪಮ್ | 7 ||
ಯದ್ವಾಗಾಸೀತೃಪಾಣೀ ಕುಮತನಿರಸನೇ ಬದ್ಧದೀಕ್ಷಾಂ ನಿರೀಕ್ಷನ್
ನೂನಂ ಕೃಷ್ಣಾಖ್ಯ ಭೂಪಃ ಸಮುಚಿತಪದದೋ ಗೂಳಿನಾಮಾನಮಾಹ |
ತತ್ ಸೇವ್ಯಾಂಘ್ರದ್ವಯಂ ವೈ ಸ್ವಭಜಕಸುಜನೇ ಭೂರಿ ಕಾರುಣ್ಯಯುಕ್ತಂ
ಶ್ರೀ ರಾಮಧ್ಯಾನಸಕ್ತಂ ಪ್ರಣಮತ ಸತತಂ ಸತ್ಯಸಂಕಲ್ಪರಾಜಮ್ || 8 ||
ಯನ್ ಮಂತ್ರಾಕ್ಷತ ಮಾಹಾತ್ಮಾತ್ ಸ್ವಂ ಗ್ರಂಥಂ ಪೂರ್ಣಮಾಪ ಹಿ |
ದ್ವೈತದ್ಯುಮಣಿನಿರ್ಮಾತಾ ತಾನ್ ವಂದೆ ಗುರುಶೇಖರಾನ್ || 9 ||
ಉಮರ್ಜಿ ಯದುಪತ್ಯಾರ್ಯಸೂನುದಾಮೋದರೇಣ ಹಿ ।
ಆಷಾಢಪೌರ್ಣಿಮಾಯಾಂ ತು ಸತ್ಯಸಂಕಲ್ಪತುಷ್ಟಯೇ || 10 ||
ಕೃತಂ ತಚ್ಚರಣದ್ವಂದ್ವಪುಷ್ಟವಚ್ಚ ಸಮರ್ಪಿತಮ್ |
ಯೇ ಪಠಂತಿ ನರಾ ನಿತ್ಯಂ ತೇಷಾಂ ತುಷ್ಟೋ ಭವೇದ್ಗುರುಃ || 11 ||